ಅದೃಶ್ಯಂತೀ
	
ವಸಿಷ್ಠನ ಮಗ ಶಕ್ತಿಮಹರ್ಷಿಯ ಹೆಂಡತಿ. ತಂದೆ ಚಿತ್ರಮುಖ. ಪರಾಶರಮುನಿ ಈಕೆಯ ಮಗ. ಈತ ಮೊದಲು ವೈಶ್ಯನಾಗಿದ್ದ. ಇವನು ತಪಸ್ಸು ಮಾಡಿ ಬ್ರಾಹ್ಮಣ್ಯವನ್ನು ಪಡೆದ ಅನಂತರ ಈಕೆ ಹುಟ್ಟಿದಳು. ಮಹಾಭಾರತದಲ್ಲಿ ಈಕೆಯ ಬಗ್ಗೆ ವಿವರಗಳಿವೆ.											
(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ